ಮುಖ್ಯ ವಿಷಯಕ್ಕೆ ಹೋಗಿ
Irradiant Energy
+91 98457 94343Irradiant Energy ತಂಡಕ್ಕೆ ಕರೆ ಮಾಡಿ
Irradiant Energy
ENಕನ್ನಡ

ಮನೆ ಮಾಲೀಕರಿಗಾಗಿ

ಕರ್ನಾಟಕದಲ್ಲಿ ನಿಮ್ಮ ಮನೆಗೆ ಸೋಲಾರ್ — ಆರಂಭದಿಂದ ಕೊನೆಯವರೆಗೆ ನಾವು ವಿನ್ಯಾಸ ಮಾಡುತ್ತೇವೆ.

ಸ್ಥಳ ಭೇಟಿಯಿಂದ ಅಳವಡಿಕೆಯವರೆಗೆ ಎಲ್ಲವನ್ನೂ ನಾವು ನೋಡಿಕೊಳ್ಳುತ್ತೇವೆ. ಪ್ರತಿ ತಿಂಗಳೂ ನಿಮ್ಮ ಬಿಲ್‌ನಲ್ಲಿ ಉಳಿತಾಯ ನಿಮಗೆ ಕಾಣುತ್ತದೆ.

ಮನೆಯ ಚಾವಣಿ ಮೇಲೆ ಸೋಲಾರ್ ಪ್ಯಾನೆಲ್‌ಗಳು; ಸುತ್ತಲೂ ತೆಂಗಿನ ಮರಗಳು ಮತ್ತು ಅಕ್ಕಪಕ್ಕದ ಮನೆಗಳು, ಮೇಲೆ ನೀಲಿ ಆಕಾಶ.

ಕೆಲಸ ಹೇಗೆ ನಡೆಯುತ್ತದೆ

ನಿಮ್ಮ ಸೋಲಾರ್ ಅಳವಡಿಕೆ ಈಗ ಸುಲಭ.

  1. ಉಚಿತ ಸ್ಥಳ ಭೇಟಿ ಮತ್ತು ಚಾವಣಿ ವಿನ್ಯಾಸ

    ನಿಮ್ಮ ಚಾವಣಿಯನ್ನು ಅಳೆಯುತ್ತೇವೆ, ನೆರಳು ಮತ್ತು ಲೋಡ್ ಪರಿಶೀಲಿಸುತ್ತೇವೆ, ಇರುವ ಜಾಗವನ್ನು ಗರಿಷ್ಠವಾಗಿ ಬಳಸಿಕೊಳ್ಳುವ ವ್ಯವಸ್ಥೆಯನ್ನು ವಿನ್ಯಾಸ ಮಾಡುತ್ತೇವೆ.

  2. ನಿಮಗೆ ತಕ್ಕ ಪ್ಲಾನ್

    ಯಾವುದಕ್ಕೂ ಒಪ್ಪಿಗೆ ಕೊಡುವ ಮೊದಲೇ, ನಿಮ್ಮ ಚಾವಣಿ ಮೇಲೆ ಪ್ಯಾನೆಲ್‌ಗಳು ಹೇಗೆ ಕೂರುತ್ತವೆ ಎಂಬುದನ್ನೂ, ರೂಪಾಯಿಗಳಲ್ಲಿ ಉಳಿತಾಯದ ಅಂದಾಜನ್ನೂ ನೀವು ನೋಡುತ್ತೀರಿ.

  3. ನಾವು ಅಳವಡಿಸುತ್ತೇವೆ. ಸಬ್ಸಿಡಿಯನ್ನೂ ನಾವೇ ನೋಡಿಕೊಳ್ಳುತ್ತೇವೆ.

    ಎಸ್ಕಾಂ ಮತ್ತು ಸರ್ಕಾರದ ಕಾಗದಪತ್ರಗಳ ಕೆಲಸವನ್ನು ನಾವು ಮಾಡುತ್ತೇವೆ.

  4. ಕಾರ್ಯಾರಂಭ. ಉಳಿತಾಯ ಶುರು.

    ನಿಮ್ಮ ವ್ಯವಸ್ಥೆ ಕಾರ್ಯಾರಂಭ ಮಾಡುತ್ತದೆ; ಅದೇ ತಿಂಗಳು ಬಿಲ್ ಕಡಿಮೆ ಆಗುತ್ತದೆ.

ನಿಮಗೆ ತಕ್ಕ ಆಯ್ಕೆ

ನಿಮ್ಮ ಮನೆಗೆ ಯಾವ ಸೋಲಾರ್ ವ್ಯವಸ್ಥೆ ಸೂಕ್ತ?

ಯಾವುದು ಸರಿ ಎಂದು ಗೊತ್ತಾಗುತ್ತಿಲ್ಲವೇ? ಕರೆಯಲ್ಲೇ ಸರಿಯಾದ ಆಯ್ಕೆ ಮಾಡಲು ನಮ್ಮ ತಂಡ ನಿಮಗೆ ನೆರವಾಗುತ್ತದೆ.

  • ಆನ್-ಗ್ರಿಡ್

    ಗ್ರಿಡ್ ಸಂಪರ್ಕದಲ್ಲೇ ಇರಿ, ಹೆಚ್ಚುವರಿ ವಿದ್ಯುತ್ ಮಾರಿ

    ನಿಮ್ಮ ಚಾವಣಿಯ ವಿದ್ಯುತ್ ಮನೆಗೆ ಬಳಕೆಯಾಗುತ್ತದೆ; ಹೆಚ್ಚುವರಿ ವಿದ್ಯುತ್ ಗ್ರಿಡ್‌ಗೆ ಹೋಗಿ ಬಿಲ್‌ನಲ್ಲಿ ಜಮಾ ಆಗುತ್ತದೆ. ಸ್ಥಿರ ವಿದ್ಯುತ್ ಪೂರೈಕೆ ಇರುವ ಮನೆಗಳಿಗೆ ಹೆಚ್ಚು ಜನಪ್ರಿಯ.

  • ಆಫ್-ಗ್ರಿಡ್

    ಬ್ಯಾಟರಿಯೊಂದಿಗೆ ಸಂಪೂರ್ಣ ಸ್ವತಂತ್ರರಾಗಿ

    ನಿಮ್ಮ ಚಾವಣಿ ಮತ್ತು ಬ್ಯಾಟರಿ ಪ್ಯಾಕ್. ಕರೆಂಟ್ ಹೋದಾಗಲೂ ಗ್ರಿಡ್ ಮೇಲೆ ಅವಲಂಬನೆ ಇಲ್ಲವೇ ಇಲ್ಲ. ವಿದ್ಯುತ್ ಸರಿಯಾಗಿ ಬರದ ಅಥವಾ ದೂರದ ಜಾಗಗಳಿಗೆ ಸೂಕ್ತ.

  • ಹೈಬ್ರಿಡ್

    ಎರಡರ ಅನುಕೂಲವೂ ಒಟ್ಟಿಗೆ — ವಿದ್ಯುತ್ ಮತ್ತು ಬ್ಯಾಕಪ್

    ಹಗಲಿನಲ್ಲಿ ಸೋಲಾರ್ ವಿದ್ಯುತ್ ಬಳಸಿ, ಹೆಚ್ಚುವರಿಯನ್ನು ಬ್ಯಾಟರಿಯಲ್ಲಿ ಸಂಗ್ರಹಿಸಿ, ಅಗತ್ಯವಿದ್ದಾಗ ಮಾತ್ರ ಗ್ರಿಡ್‌ನಿಂದ ವಿದ್ಯುತ್ ಬಳಸಿ. ಇದು ಅತ್ಯಂತ ವಿಶ್ವಾಸಾರ್ಹ ಆಯ್ಕೆ.

ನಮ್ಮನ್ನೇ ಏಕೆ ಆಯ್ಕೆ ಮಾಡಬೇಕು?

ನಿಮ್ಮ ಚಾವಣಿಗೆ, ನಿಮ್ಮ ಬಿಲ್‌ಗೆ ತಕ್ಕಂತೆ ರೂಪಿಸಿದ ವ್ಯವಸ್ಥೆ.

  • ಉಳಿತಾಯದ ಪ್ರಾಮಾಣಿಕ ಲೆಕ್ಕ, ರೂಪಾಯಿಗಳಲ್ಲಿ

    ನಾವು ಶೇಕಡಾವಾರು ಲೆಕ್ಕ ಹೇಳುವುದಿಲ್ಲ. ನಿಮ್ಮ ಬಿಲ್ ಮತ್ತು ದರದ ಸ್ಲ್ಯಾಬ್ ನೋಡಿ, ಪ್ರತಿ ತಿಂಗಳು ನಿಮಗೆ ಎಷ್ಟು ರೂಪಾಯಿ ಉಳಿತಾಯ ಆಗುತ್ತದೆ ಎಂದು ತೋರಿಸುತ್ತೇವೆ. ಯಾವುದೇ ಅಚ್ಚರಿ ಇಲ್ಲ.
  • ಒಂದೇ ತಂಡ, ಆರಂಭದಿಂದ ಕೊನೆಯವರೆಗೆ

    ಸ್ಥಳ ಭೇಟಿಯಿಂದ ಮಾರಾಟದ ನಂತರದ ಸೇವೆಯವರೆಗೆ ಎಲ್ಲವನ್ನೂ Irradiant ತಂಡವೇ ನೇರವಾಗಿ ಮಾಡುತ್ತದೆ. ಮಧ್ಯವರ್ತಿಗಳಿಲ್ಲ, ಬೇರೆಯವರತ್ತ ಬೆರಳು ತೋರಿಸುವುದೂ ಇಲ್ಲ.
  • 5 ವರ್ಷ ಉಚಿತ ನಿರ್ವಹಣೆ

    ಸ್ವಚ್ಛತೆ, ಮಾನಿಟರಿಂಗ್ ಮತ್ತು ಬಿಡಿಭಾಗಗಳು — ನಾವು ನಿಮ್ಮಲ್ಲಿಗೆ ಬರುತ್ತೇವೆ.

ಪ್ರಶ್ನೋತ್ತರ

ಪದೇ ಪದೇ ಕೇಳುವ ಪ್ರಶ್ನೆಗಳು

ನಿಮ್ಮ ಪ್ರಶ್ನೆ ಇಲ್ಲಿ ಇಲ್ಲದಿದ್ದರೆ ನಮಗೆ WhatsApp ಮಾಡಿ.

ಇನ್ನೂ ಪ್ರಶ್ನೆಗಳಿವೆಯೇ?

WhatsApp ಮೂಲಕ ನಮ್ಮ ತಂಡದೊಂದಿಗೆ ಮಾತನಾಡಿ, ಅಥವಾ ನಮಗೆ ಕರೆ ಮಾಡಿ.

ನಿಮಗೆ ಎಷ್ಟು ಉಳಿತಾಯವಾಗಬಹುದು, ನೋಡೋಣವೇ?

ಉಚಿತ ಸ್ಥಳ ಭೇಟಿ. ಉಚಿತ ಕೊಟೇಷನ್. ಯಾವುದೇ ಒತ್ತಾಯವಿಲ್ಲ.

WhatsApp ಮೂಲಕ Irradiant Energy ತಂಡಕ್ಕೆ ಸಂದೇಶ ಕಳುಹಿಸಿ

ಉಚಿತ ಕೊಟೇಷನ್ ಪಡೆಯಿರಿ

ನಿಮ್ಮ ಅಂದಾಜನ್ನು ಈಗಲೇ ನೋಡಿ. ನಂತರ ನಾವು ಉಚಿತ ಸ್ಥಳ ಭೇಟಿಗೆ ಬರುತ್ತೇವೆ.

ಕಟ್ಟಡದ ಬಗೆ
ತಿಂಗಳ ವಿದ್ಯುತ್ ಬಿಲ್